Health & Environment
ಕೇರಳದಲ್ಲಿ ಭಾರಿ ಮಳೆ: ಪ್ರವಾಹ ಮತ್ತು ಭೂಕುಸಿತಕ್ಕೆ 7 ಮಂದಿ ಸಾವು

ಕೇರಳದಲ್ಲಿ ಭಾರಿ ಮಳೆ: ಪ್ರವಾಹ ಮತ್ತು ಭೂಕುಸಿತಕ್ಕೆ 7 ಮಂದಿ ಸಾವು

prajavani2h
THE BRIEF
1

ಕೇರಳದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತದ ಅವಘಡಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

2

ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದ್ದು, ಇಡುಕ್ಕಿ ಜಿಲ್ಲೆಯ ಅಡೂರ್ಮಲಾದಲ್ಲಿ 65 ವರ್ಷದ ಸುಮತಿ ಮತ್ತು ವಾಗಮೋನ್‌ನಲ್ಲಿ 77 ವರ್ಷದ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ.

3

ಭಾರತೀಯ ಹವಾಮಾನ ಇಲಾಖೆಯು ಭಾನುವಾರವೂ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಶಬರಿಮಲೆಗೆ ಭೇಟಿ ನೀಡದಂತೆ ಭಕ್ತರಿಗೆ ದೇವಸ್ವಂ ಮಂಡಳಿ ಮನವಿ ಮಾಡಿದೆ.