
ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು, ಶಿವಮೊಗ್ಗ, ತಾಳಗುಪ್ಪ ಮತ್ತು ತಿರುಪತಿ ಮಾರ್ಗಗಳ ರೈಲುಗಳಿಗೆ ಸಾಂಪ್ರದಾಯಿಕ ಬೋಗಿಗಳ ಬದಲಿಗೆ ಎಲ್ಎಚ್ಬಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ.
ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್ ಅಕ್ಟೋಬರ್ 20 ರಿಂದ ಹಾಗೂ ತಾಳಗುಪ್ಪ-ಶಿವಮೊಗ್ಗ ಟೌನ್ ರೈಲುಗಳು ಅಕ್ಟೋಬರ್ 21 ರಿಂದ ಹೊಸ ಬೋಗಿಗಳೊಂದಿಗೆ ಸಂಚರಿಸಲಿವೆ.
ಹೊಸ ವ್ಯವಸ್ಥೆಯಡಿ ಈ ರೈಲುಗಳು 19 ಎಲ್ಎಚ್ಬಿ ಬೋಗಿಗಳನ್ನು ಹೊಂದಿರಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಆರಾಮದಾಯಕ ಅನುಭವ ಸಿಗಲಿದೆ.