
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತಕ್ಷಣವೇ 3 ಲಕ್ಷ ಟನ್‌ಗಿಂತ ಹೆಚ್ಚು ಡೀಸೆಲ್ ಪೂರೈಕೆಯಾಗುವ ಒಪ್ಪಂದವನ್ನು ಘೋಷಿಸಿದ್ದಾರೆ.
ಅಮೆರಿಕದಲ್ಲಿ ಇಂಧನ ಬೆಲೆ ಇಳಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ರಷ್ಯಾ ತೈಲ ಆಮದು ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಲಾಗಿದೆ.
ರಷ್ಯಾದ ಇಂಧನ ಮಾರಾಟದಿಂದ ಆ ದೇಶಕ್ಕೆ ಯುದ್ಧ ಮುಂದುವರಿಸಲು ಆರ್ಥಿಕ ನೆರವು ಸಿಗಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.