ಭಾರತ ಮೂಲದ ಲಕ್ಷ್ಮಣನ್ ಮೆಯ್ಯಪ್ಪನ್ ಅವರು 16 ವರ್ಷ 170 ದಿನಗಳ ವಯಸ್ಸಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
2005ರ ಜನವರಿ 11 ರಂದು ಜನಿಸಿದ ಮೆಯ್ಯಪ್ಪನ್, 2021ರ ಜೂನ್ 31 ರಂದು ಈ ಸಾಧನೆ ಮಾಡಿದ್ದು, ಪ್ರಸ್ತುತ ದುಬೈನ ಸೆಂಚುರಿ ಫೈನಾನ್ಶಿಯಲ್ನಲ್ಲಿ ಹಿರಿಯ ಸಂಶೋಧನಾ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋವಿಡ್-19 ಲಾಕ್ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡ ಅವರು, ಕೇವಲ ಒಂದು ವರ್ಷದ ಅವಧಿಯಲ್ಲಿ ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.