
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಸೋಮವಾರ (ಜುಲೈ 27) ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷಾ ಅಕ್ರಮಗಳ ತಡೆಗೆ ತಿದ್ದುಪಡಿ ಮಸೂದೆ 2026 ಅನ್ನು ಮಂಡಿಸಲಿದೆ.
ಈ ಮಸೂದೆಯಡಿ ಅಕ್ರಮದಲ್ಲಿ ಭಾಗಿಯಾದವರಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ, ಹಾಗೂ ಸಂಘಟಿತ ಅಪರಾಧ ಸಾಬೀತಾದರೆ 10 ಕೋಟಿ ರೂ. ದಂಡ ವಿಧಿಸಲಾಗುತ್ತದೆ.
ಪರೀಕ್ಷಾ ಅಕ್ರಮಗಳ ತನಿಖೆಯನ್ನು ಎಸ್ಟಿಎಫ್ ಅಥವಾ ಕೇಂದ್ರ ತನಿಖಾ ಸಂಸ್ಥೆಗಳು ಕೇವಲ 2 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಈ ಹೊಸ ಕಾನೂನಿನಲ್ಲಿ ಕಡ್ಡಾಯ ಕಾಲಮಿತಿ ನಿಗದಿಪಡಿಸಲಾಗಿದೆ.