
ಬಿಎಂಡಬ್ಲ್ಯೂ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ನಟ ರಣವೀರ್ ಸಿಂಗ್, ತಮ್ಮ ಕಾರು ಸಂಗ್ರಹಕ್ಕೆ ಅದೇ ಕಂಪನಿಯ ಅತ್ಯಾಧುನಿಕ ಐ7 ಎಲೆಕ್ಟ್ರಿಕ್ ಕಾರನ್ನು ಸೇರ್ಪಡೆಗೊಳಿಸಿದ್ದಾರೆ.
ಮುಂಬೈನ ಶೋರೂಮ್ನಿಂದ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಪ್ಪು ಬಣ್ಣದ ಈ ಐಷಾರಾಮಿ ಕಾರನ್ನು ನಟ ಸ್ವತಃ ಡ್ರೈವ್ ಮಾಡಿಕೊಂಡು ತೆರಳಿದ್ದಾರೆ.
ರಣವೀರ್ ಸಿಂಗ್ ಬಳಿ ಈಗಾಗಲೇ ಹಮ್ಮರ್ ಇವಿ ಸೇರಿದಂತೆ ಹಲವು ಐಷಾರಾಮಿ ಕಾರುಗಳಿದ್ದು, ವೃತ್ತಿಜೀವನದಲ್ಲಿ ಅವರು ಪ್ರಸ್ತುತ 'ಪ್ರಳಯ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.