
ನಟ ನಾನಿ ಅಭಿನಯದ, ಶ್ರೀಕಾಂತ್ ಒಡೆಲ ನಿರ್ದೇಶನದ ಆಕ್ಷನ್ ಡ್ರಾಮಾ ಸಿನಿಮಾ 'ದಿ ಪ್ಯಾರಡೈಸ್' ಬಿಡುಗಡೆಯಾದ 6ನೇ ದಿನಕ್ಕೆ ಭಾರತದಲ್ಲಿ 100 ಕೋಟಿ ರೂ. ನಿವ್ವಳ ಗಳಿಕೆ ಗಡಿಯನ್ನು ದಾಟಿದೆ.
ಸಿನಿಮಾದ ಕತೆ, ಚಿತ್ರಕತೆ ಹಾಗೂ ಅತಿಯಾದ ಹಿಂಸೆಯ ಬಗ್ಗೆ ಆರಂಭದಿಂದಲೂ ತೀವ್ರ ಟೀಕೆಗಳು ಹಾಗೂ ನೆಗೆಟಿವ್ ವಿಮರ್ಶೆಗಳು ಹರಿದಾಡಿದ್ದವು.
ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಗೊಂಡಿರುವ ಈ ಚಿತ್ರವು ವಿಶ್ವಾದ್ಯಂತ ಸುಮಾರು 145 ರಿಂದ 150 ಕೋಟಿ ರೂಪಾಯಿಗಳಿಗೂ ಅಧಿಕ ಒಟ್ಟು ಗಳಿಕೆ ಮಾಡಿದೆ.