
ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ವಾಗತಿಸಿದ್ದಾರೆ.
ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇನ್ನು ಮುಂದೆ ಮೈಸೂರು ವಿಭಾಗೀಯ ಪ್ರಧಾನ ಕಚೇರಿ ಮತ್ತು ಹುಬ್ಬಳ್ಳಿ ವಲಯ ಪ್ರಧಾನ ಕಚೇರಿಯ ವ್ಯಾಪ್ತಿಗೆ ಬರಲಿದೆ.
ಪಾಲಕ್ಕಾಡ್ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸುವ ನಿರ್ಧಾರವು ಕೇರಳದ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.