
ಕೇರಳದ ವಯನಾಡ್ ಜಿಲ್ಲೆಯ ಕಾಟಿಕುಲಂ ಬಳಿ ಬೆಟ್ಟದ ಇಳಿಜಾರಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮರಿ ಆನೆಯೊಂದು ಸಾವನ್ನಪ್ಪಿದೆ.
ತನ್ನ ಮರಿಯನ್ನು ರಕ್ಷಿಸಲು ತಾಯಿ ಆನೆಯು ಸೊಂಡಿಲಿನಿಂದ ಎಬ್ಬಿಸಲು ಪ್ರಯತ್ನಿಸುತ್ತಾ ಗಂಟೆಗಳ ಕಾಲ ಅಸಹಾಯಕರಾಗಿ ಘೀಳಿಟ್ಟ ಕರುಣಾಜನಕ ದಶ್ಯವು ಕಂಡುಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರ ತಂಡವು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಮರಿ ಆನೆಯು ಬಿದ್ದ ರಭಸಕ್ಕೆ ಆಂತರಿಕವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದೆ.