
ನವರಾತ್ರಿ, ದುರ್ಗಾ ಪೂಜೆ ಮತ್ತು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 17 ರಿಂದ ಅಕ್ಟೋಬರ್ 25 ರವರೆಗೆ ದೇಶದ ವಿವಿಧ ನಗರಗಳಲ್ಲಿ ಬ್ಯಾಂಕುಗಳಿಗೆ ಸತತ ರಜೆಗಳು ಇರಲಿವೆ ಎಂದು ಆರ್ಬಿಐ ರಜಾಪಟ್ಟಿ ತಿಳಿಸಿದೆ.
ಈ ರಜೆಗಳು ಇಡೀ ದೇಶಕ್ಕೆ ಅನ್ವಯಿಸದೆ ಸ್ಥಳೀಯ ಹಬ್ಬಗಳಿಗೆ ಅನುಗುಣವಾಗಿ ಆಯಾ ರಾಜ್ಯಗಳು ಮತ್ತು ನಗರಗಳಿಗೆ ಮಾತ್ರ ಅನ್ವಯಿಸುತ್ತವೆ.
ಬ್ಯಾಂಕ್ ಬಾಗಿಲು ಮುಚ್ಚಿದ್ದರೂ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಗ್ರಾಹಕರಿಗೆ ಲಭ್ಯವಿರುತ್ತವೆ.