
ಜಪಾನ್ ದೇಶದ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟರ್ಗಳು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸುರುಚಿ ಇಂದರ್ ಸಿಂಗ್ ಮತ್ತು ಕಮಲ್ಜೀತ್ ಜೋಡಿ ಈ ಸಾಧನೆ ಮಾಡಿದೆ.
ಅರ್ಹತಾ ಸುತ್ತಿನಲ್ಲಿ ಈ ಭಾರತೀಯ ಜೋಡಿ ಒಟ್ಟು 587 ಅಂಕಗಳನ್ನು ಗಳಿಸಿ ನೂತನ ಏಷ್ಯನ್ ಗೇಮ್ಸ್ ಅರ್ಹತಾ ದಾಖಲೆ ನಿರ್ಮಿಸಿತು.