
ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ನೆಹರು ತಾರಾಲಯದಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಿದರು.
ನಗರದಲ್ಲಿ ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ. ಆದರೆ, ಕೆಲವು ಟೆಂಡರ್‌ಗಳ ಅವಧಿ ಮುಗಿದಿರುವುದರಿಂದ ಮತ್ತು ಹೊಸ ಟೆಂಡರ್ ಕರೆಯಲು ಸಾಧ್ಯವಾಗದಿರುವುದರಿಂದ ಸಮಸ್ಯೆಗಳು ಎದುರಾಗಿವೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಲ್ಕ್ ಜನರೇಟರ್ಸ್‌ಗಳು ಪ್ರತ್ಯೇಕ ವೆಂಡರ್‌ಗಳ ಜೊತೆ ಕೈಜೋಡಿಸಬೇಕು ಅಥವಾ ತ್ಯಾಜ್ಯವನ್ನು ಸ್ಥಳದಲ್ಲೇ ಕಾಂಪೋಸ್ಟ್ ಮಾಡಬೇಕು. ಆದರೆ, ನಗರದಲ್ಲಿ ಕೇವಲ 2 ಸಾವಿರ ಜನ ಮಾತ್ರ ಅಧಿಕೃತವಾಗಿ ಟೈ-ಅಪ್ ಆಗಿದ್ದು, ಉಳಿದ 48 ಸಾವಿರ ಬಲ್ಕ್ ಜನರೇಟರ್ಸ್‌ಗಳು ಅಕ್ರಮವಾಗಿ ಕಸ ನೀಡುತ್ತಿದ್ದಾರೆ.