ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ 50.33 ಸರಾಸರಿ ಹಾಗೂ 196.10 ಸ್ಟ್ರೈಕ್-ರೇಟ್‌ನಲ್ಲಿ ಭರ್ಜರಿ 151 ರನ್ ಗಳಿಸಿ, 2 ಅರ್ಧಶತಕಗಳೊಂದಿಗೆ ಭಾರತ ತಂಡ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಲು ಮುಖ್ಯ ಕಾರಣಕರ್ತರಾದರು.
ಸರಣಿ ಮುಗಿದ ಬಳಿಕ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾನ್ ಅವರು ಎಕ್ಸ್‌ನಲ್ಲಿ,
ಈ ಹುಡುಗ ಯಾರ ಜಾಗವನ್ನು ಕಬಳಿಸಿದ್ದಾನೋ, ಅವರನ್ನು ಮತ್ತೆ ವಾಪಸ್ ಬರಲು ಖಂಡಿತ ಬಿಡುವುದಿಲ್ಲ.... ಈ ವೈಭವ್ ಸೂರ್ಯವಂಶಿ ಎಷ್ಟು ಸ್ಪೆಷಲ್ ಅಲ್ವಾ?
ಎಂದು ಪೋಸ್ಟ್ ಮಾಡುವ ಮೂಲಕ ವೈಭವ್ ಪ್ರದರ್ಶನವನ್ನು ಶ್ಲಾಘಿಸಿದರು.
ವೈಭವ್ ಸೂರ್ಯವಂಶಿ 3ನೇ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು, ಇದು ಸಂಜು ಸ್ಯಾಮ್ಸನ್ ಅವರ ತಂಡಕ್ಕೆ ಮರಳುವಿಕೆಯನ್ನು ಕಷ್ಟಕರವಾಗಿಸಿದೆ ಎಂದು ಪಠಾನ್ ಪರೋಕ್ಷವಾಗಿ ಸೂಚಿಸಿದರು.