
ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಭಾರತೀಯ ರೈಲ್ವೆಯು ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ ಮತ್ತು ತಮಿಳುನಾಡು ನಡುವಿನ 4 ವಿಶೇಷ ರೈಲುಗಳ ಸೇವೆಯನ್ನು 2026ರ ನವೆಂಬರ್ ವರೆಗೆ ವಿಸ್ತರಿಸಿದೆ.
ಅಹಮದಾಬಾದ್-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (09424/09423) ಮತ್ತು ಕಾನ್ಪುರ ಸೆಂಟ್ರಲ್-ಮಧುರೈ ಎಕ್ಸ್ಪ್ರೆಸ್ (01925/01926) ರೈಲುಗಳು ಈ ಅವಧಿಯಲ್ಲಿ ತಲಾ 13 ಟ್ರಿಪ್ ಸಂಚರಿಸಲಿವೆ.
ಅಹಮದಾಬಾದ್-ಮಂಗಳೂರು ರೈಲು ಸೆಪ್ಟೆಂಬರ್ 4 ರಿಂದ ನವೆಂಬರ್ 27 ರವರೆಗೆ ಸಂಚರಿಸಲಿದ್ದು, ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ.