
ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಜಿಯೊ ಕಂಪನಿಯು ಎಐ ಕನ್ನಡಕವನ್ನು ಪ್ರದರ್ಶಿಸಿದೆ.
ಬಳಕೆದಾರರು ಸ್ಮಾರ್ಟ್‌ಫೋನ್ ಹೊರತೆಗೆಯದೆ ಕ್ಯಾಮೆರಾ ಗ್ಲಾಸ್ ಮೂಲಕ ಕ್ಯೂಆರ್ ಕೋಡ್ ವೀಕ್ಷಿಸಿ ಧ್ವನಿ ಆದೇಶ ನೀಡಿ ಯುಪಿಐ ಸರ್ಕಲ್ ಮೂಲಕ ಪ್ರತಿ ವಹಿವಾಟಿಗೆ ₹5,000ವರೆಗೆ ಪಾವತಿಸಬಹುದು.
ವಿವಿಧ ಭಾರತೀಯ ಭಾಷೆಗಳ ನಡುವೆ ಲೈವ್ ಅನುವಾದ ಮಾಡುವ ವೈಶಿಷ್ಟ್ಯ ಹಾಗೂ ಸಭೆಗಳಲ್ಲಿ ಟಿಪ್ಪಣಿ ಬರೆಯಲು ಎಐ ನೆರವನ್ನು ಈ ಸಾಧನದಲ್ಲಿ ಅಳವಡಿಸಲಾಗಿದೆ.