
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದೀವೆಯಾಗರ್ ಕಡಲತೀರದಲ್ಲಿ ಪಿಕ್ನಿಕ್ ತೆರಳಿದ್ದ ಪುಣೆಯ ಆಳಂದಿಯ ಖಾಸಗಿ ಕೋಚಿಂಗ್ ಕ್ಲಾಸ್ನ 8 ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪುಣೆಯ ಆಳಂದಿಯಿಂದ 48 ಜನರ ತಂಡವು ಪಿಕ್ನಿಕ್ಗೆ ಆಗಮಿಸಿದ್ದು, ವಿದ್ಯಾರ್ಥಿಗಳು ಸಮುದ್ರದ ಆಳ ಹಾಗೂ ಭೀಕರ ಅಲೆಗಳ ಸೆಳೆತವನ್ನು ಅಂದಾಜಿಸಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳೀಯರು ಮತ್ತು ಅಧಿಕಾರಿಗಳು ಸುದೀರ್ಘ ಹುಡುಕಾಟ ನಡೆಸಿ ಎಂಟೂ ಮೃತದೇಹಗಳನ್ನು ಹೊರತೆಗೆದಿದ್ದು, ಬೋರ್ಲಿಪಂಚಾತನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.