
ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಶ್ರಮದಿಂದ ಚಂಡಮಾರುತ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನಿಖರ ಹವಾಮಾನ ಮುನ್ಸೂಚನೆ ಪಡೆಯಲು ಸಾಧ್ಯವಾಗುತ್ತಿದೆ.
ಸ್ವಯಂಚಾಲಿತ ಹವಾಮಾನ ಕೇಂದ್ರಗಳು, ಮಳೆಮಾಪಕಗಳು, ಡಾಪ್ಲರ್ ರೇಡಾರ್ಗಳು ಮತ್ತು ಉಪಗ್ರಹಗಳ ಮೂಲಕ ನೆಲಮಟ್ಟದಿಂದ 35 ಕಿ.ಮೀ. ಎತ್ತರದವರೆಗೆ ದತ್ತಾಂಶ ಸಂಗ್ರಹಿಸಲಾಗುತ್ತದೆ.
ಸಂಗ್ರಹಿಸಿದ ಮಾಹಿತಿಯನ್ನು ಸೂಪರ್ ಕಂಪ್ಯೂಟರ್ಗಳ ನ್ಯೂಮೆರಿಕಲ್ ವೆದರ್ ಪ್ರಿಡಿಕ್ಷನ್ ಮಾದರಿಗಳಲ್ಲಿ ವಿಶ್ಲೇಷಿಸಿ ತಜ್ಞರ ಪರಿಶೀಲನೆಯ ಬಳಿಕ ಮುನ್ಸೂಚನೆ ನೀಡಲಾಗುತ್ತದೆ.