
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ರೈತರಿಗೆ ಸೇರಿದ ಜೋಡೆತ್ತುಗಳು ಟ್ರ್ಯಾಕ್ಟರ್ಗಿಂತಲೂ ವೇಗವಾಗಿ ಕೆಲಸ ಮಾಡಿ ದಾಖಲೆ ಬರೆದಿವೆ.
ಗುಂಡಪ್ಪ ನೀರುಗ್ಗಿ ಮತ್ತು ಜಕ್ಕಪ್ಪ ನವಲಗನ್ ಎಂಬ ರೈತರಿಗೆ ಸೇರಿದ ಈ ಜೋಡೆತ್ತುಗಳು ಬೆಳಿಗ್ಗೆ 5ರಿಂದ ಸಂಜೆ 3ರವರೆಗೆ ಕೇವಲ 10 ಗಂಟೆಗಳಲ್ಲಿ 20 ಎಕರೆ ಬಿಳಿಜೋಳ ಬಿತ್ತನೆ ಮಾಡಿವೆ.
ಸಾಮಾನ್ಯವಾಗಿ ಒಂದು ಜೋಡೆತ್ತು ದಿನಕ್ಕೆ 4 ರಿಂದ 5 ಎಕರೆ ಮಾತ್ರ ಬಿತ್ತನೆ ಮಾಡುತ್ತವೆ.