
2028-29ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ 5,000 ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪ್ರಸ್ತುತ ಭಾರತದಲ್ಲಿ 86,360 ಪಿಜಿ ವೈದ್ಯಕೀಯ ಸೀಟುಗಳಿದ್ದು, ಕರ್ನಾಟಕವು 10,092 ಸೀಟುಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಲೋಕಸಭೆಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ಪ್ರತಿ ಸೀಟಿಗೆ ಗರಿಷ್ಠ 1.50 ಕೋಟಿ ರೂಪಾಯಿ ವೆಚ್ಚದ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದರೊಂದಿಗೆ 5,023 ಹೊಸ ಎಂಬಿಬಿಎಸ್ ಸೀಟುಗಳನ್ನು ಸಹ ಹಂತ ಹಂತವಾಗಿ ಸೇರ್ಪಡೆಗೊಳಿಸಲಾಗುವುದು.