
ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಮಾಜಿ ಸದಸ್ಯೆ ಗೀತಾ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ ಎರಡು ವಾರಗಳ ಕಾಲ ವಿಚಾರಣೆ ನಡೆಸಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಾಣಿಜ್ಯ ಇಲಾಖೆಯ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕಡಿಮೆ ಆದಾಯ ಪ್ರಮಾಣಪತ್ರದ ಕುರಿತು ಶಿವಶಂಕರಪ್ಪ ಪುತ್ರಿ ಸುಮಾ ಸಾಹುಕಾರ್ ವಿರುದ್ಧವೂ ತನಿಖೆ ಮುಂದುವರಿದಿದೆ.