
ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರದ ಎಸಿ ಮೆಕ್ಯಾನಿಕ್ ಎಸ್. ಸೈಯದ್ ಅಬೂಬಕರ್ (28) ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೊಬೈಲ್ ಫೋನ್ ತಪಾಸಣೆಯಲ್ಲಿ ಪಿಸ್ತೂಲ್ಗಳ ಫೋಟೋಗಳು ಪತ್ತೆಯಾಗಿದ್ದು, ಈತ ದೆಹಲಿ ಮತ್ತು ಕೇರಳದಲ್ಲಿ ತರಬೇತಿ ಪಡೆದಿದ್ದನೆಂದು ತನಿಖಾ ಸಂಸ್ಥೆಗಳು ತಿಳಿಸಿವೆ.
ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 113(3) ಮತ್ತು 197(2) ಅಡಿಯಲ್ಲಿ ಉಗ್ರವಾದಿ ಕೃತ್ಯ ಹಾಗೂ ರಾಷ್ಟ್ರೀಯ ಏಕತೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.