
ರಾಮಮಂದಿರದ ದೇಣಿಗೆ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಸೆಪ್ಟೆಂಬರ್ 25ರೊಳಗೆ ಮೊದಲ ದೋಷಾರೋಪಪಟ್ಟಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದೆ.
ಆರೋಪಿಗಳು ಜಾಮೀನು ಪಡೆಯುವುದನ್ನು ತಪ್ಪಿಸಲು ಹಾಗೂ 90 ದಿನಗಳ ಕಾಲಾವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.
ದೇವಾಲಯದ ಸಿಸಿಟಿವಿ ಕ್ಯಾಮೆರಾಗಳಲ್ಲಿ 105 ಬಾರಿ ದೇಣಿಗೆ ಕಳ್ಳತನವಾಗಿರುವುದು ದಾಖಲಾಗಿದ್ದು, ಮೊಬೈಲ್ ದತ್ತಾಂಶ ಹಾಗೂ ಕರೆ ವಿವರಗಳು ಪ್ರಮುಖ ಸಾಕ್ಷ್ಯಗಳಾಗಿವೆ.