
ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಕಂಡ 'ಪ್ರೇಮದ ಊರಲಿ' ಸಿನಿಮಾದ ಚಿತ್ರೀಕರಣ ನಡೆದ ಹಾಸನದ ಸೀಗೆಗುಡ್ಡಕ್ಕೆ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಸಾವಿರಾರು ಜನರು ಭೇಟಿ ನೀಡುತ್ತಿರುವುದರಿಂದ ಕಿರಿದಾದ ರಸ್ತೆ, ಪಾರ್ಕಿಂಗ್ ಸಮಸ್ಯೆ ಹಾಗೂ ಕಾಡುಪ್ರಾಣಿಗಳ ಸಂಘರ್ಷದ ಭೀತಿ ಎದುರಾಗಿದೆ.
ಮೀಸಲು ಅರಣ್ಯ ಪ್ರದೇಶವಾಗಿರುವ ಕಾರಣ ಈ ಸ್ಥಳಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸಿದೆ.