
ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ನಡೆದ 20ನೇ ರೋಜ್ಗಾರ್ ಮೇಳದಲ್ಲಿ ದೇಶಾದ್ಯಂತ 51,000ಕ್ಕೂ ಹೆಚ್ಚು ಯುವಕ ಯುವತಿಯರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಅಕ್ಟೋಬರ್ 2022ರಲ್ಲಿ 10 ಲಕ್ಷ ಉದ್ಯೋಗಗಳ ಗುರಿಯೊಂದಿಗೆ ಆರಂಭವಾದ ಈ ಮಿಷನ್ ಅಡಿಯಲ್ಲಿ ಈವರೆಗೆ ಒಟ್ಟು 20 ಆವೃತ್ತಿಗಳಲ್ಲಿ 12.75 ಲಕ್ಷ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಕೈಗಾರಿಕಾ ವಲಯದ ಸಹಭಾಗಿತ್ವದೊಂದಿಗೆ ಪಿಎಂ ಸೇತು ಯೋಜನೆಯಡಿ ₹60,000 ಕೋಟಿ ಹೂಡಿಕೆಯೊಂದಿಗೆ 1,000 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಆಧುನೀಕರಿಸಲಾಗುತ್ತಿದೆ ಎಂದು ಅವರು ನವದೆಹಲಿಯಲ್ಲಿ ಹೇಳಿದರು.