
ಬೆಂಗಳೂರು ಉತ್ತರ ತಾಲೂಕಿನ ಕಮ್ಮಗೊಂಡನಹಳ್ಳಿಯ ಮಳಿಗೆಯೊಂದರಲ್ಲಿ 6 ಕೆ.ಜಿ. ತೂಕದ 23 ಸಿಲಿಂಡರ್ಗಳು ಒಂದರ ನಂತರ ಒಂದರಂತೆ ಏಕಕಾಲಕ್ಕೆ ಸ್ಫೋಟಗೊಂಡು ಭಾರಿ ಅಗ್ನಿ ಅನಾಹುತ ಸಂಭವಿಸಿದೆ.
ಈ ಮಳಿಗೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಸೀಮೆಎಣ್ಣೆಯನ್ನು ಮಾರಾಟ ಮಾಡಲಾಗುತ್ತಿದ್ದು, ಈ ಇಂಧನಗಳ ದಾಸ್ತಾನು ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿರಬಹುದು ಎಂದು ಅಂದಾಜಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.