
ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ತನ್ನ ಎಕ್ಸ್ 1 ಸರಣಿಯ ನೂತನ 'ಎಲ್‌ಡಬ್ಲ್ಯುಬಿ' ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಎಕ್ಸ್ ಷೋರೂಂ ಬೆಲೆ ₹49.90 ಲಕ್ಷವಾಗಿದೆ.
ಈ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 156 ಎಚ್‌ಪಿ ಸಾಮರ್ಥ್ಯ ಮತ್ತು 1,700 ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ವಿಶಾಲ ಒಳಾಂಗಣವನ್ನು ಒಳಗೊಂಡಿದೆ.
ಕಂಪನಿಯು ಪ್ರಸಕ್ತ ವರ್ಷದಲ್ಲಿ 9,000 ಕಾರುಗಳನ್ನು ಮಾರಾಟ ಮಾಡಿ ಶೇ. 17ರಷ್ಟು ಬೆಳವಣಿಗೆ ಸಾಧಿಸಿದ್ದು, ಹೊಸದಾಗಿ 99 ಐ5 ಎಲ್‌ಡಬ್ಲ್ಯುಬಿ ಇವಿ ಕಾರುಗಳ ಬುಕಿಂಗ್ ಆರಂಭಿಸಿದೆ.