
ಬಾಂಗ್ಲಾದೇಶದ ರೂಪ್‌ಪುರ್ ಅಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದಿಂದ ಯುರೇನಿಯಂ ಅಣು ಇಂಧನ ಹೊತ್ತು ತರುತ್ತಿದ್ದ ವಿಮಾನಕ್ಕೆ ಪಾಕಿಸ್ತಾನವು ತನ್ನ ವಾಯುಮಾರ್ಗ ಪ್ರವೇಶಿಸಲು ಅನುಮತಿ ನಿರಾಕರಿಸಿದೆ.
ಪಾಕಿಸ್ತಾನದ ಈ ನಿರ್ಧಾರದಿಂದಾಗಿ ಬಾಂಗ್ಲಾದೇಶಕ್ಕೆ ತಲುಪಬೇಕಿದ್ದ ಪ್ರಮುಖ ಯುರೇನಿಯಂ ಪೂರೈಕೆ ವಿಳಂಬವಾಗಿದ್ದು, ಅಣುಸ್ಥಾವರ ಕಾರ್ಯಾರಂಭಗೊಳ್ಳುವ ಕಾಲಮಿತಿಯ ಮೇಲೂ ಪರಿಣಾಮ ಬೀರಲಿದೆ.
ರಷ್ಯಾದ ರೊಸಾಟಮ್ ಸಂಸ್ಥೆಯು ಅಕ್ಟೋಬರ್ ಮೊದಲ ವಾರದಲ್ಲಿ ಯುರೇನಿಯಂ ಬಾಂಗ್ಲಾದೇಶ ತಲುಪುವಂತೆ ನೂತನ ವೇಳಾಪಟ್ಟಿಯನ್ನು ಪ್ರಸ್ತಾಪಿಸಿದ್ದು, ಪಾಕಿಸ್ತಾನ ಇದನ್ನು ತಾಂತ್ರಿಕ ವಿಷಯ ಎಂದು ಸಮರ್ಥಿಸಿಕೊಂಡಿದೆ.