
ಜಪಾನ್ನ ನಾಗೋಯಾದ ಮಿಝಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ 20ನೇ ಏಷ್ಯನ್ ಗೇಮ್ಸ್ಗೆ ಶನಿವಾರ ಅಧಿಕೃತ ಚಾಲನೆ ದೊರೆಯಿತು.
ಪಥಸಂಚಲನದಲ್ಲಿ ಭಾರತದ 501 ಅಥ್ಲೀಟ್ಗಳ ತಂಡವನ್ನು ಶೂಟರ್ ಮನು ಭಾಕರ್ ಮತ್ತು ಕಬಡ್ಡಿ ತಾರೆ ಪವನ್ ಸೆಹ್ರಾವತ್ ಧ್ವಜಧಾರಿಗಳಾಗಿ ಮುನ್ನಡೆಸಿದರು.
ಈ ಕ್ರೀಡಾಕೂಟದಲ್ಲಿ 45 ದೇಶಗಳ ಸುಮಾರು 11,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಅಕ್ಟೋಬರ್ 4ರ ವರೆಗೆ ನಡೆಯಲಿದೆ.