
ನಟ ಯಶ್ ಅವರು ತಾವು ಯಾವುದೇ ಸಿನಿಮಾಗಳಿಗೂ ಸಂಭಾವನೆ ಪಡೆಯುವುದಿಲ್ಲ ಬದಲಿಗೆ ಸಹ ನಿರ್ಮಾಪಕನಾಗಿ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಪ್ ಕಿ ಅದಾಲತ್ ಸಂದರ್ಶನದಲ್ಲಿ ಮಾತನಾಡಿದ ಯಶ್, ಗೆದ್ದರೆ ನಿರ್ಮಾಪಕರೊಂದಿಗೆ ಲಾಭ ಹಂಚಿಕೊಳ್ಳುತ್ತೇನೆ ಮತ್ತು ಸೋತರೆ ನಷ್ಟವನ್ನೂ ಅನುಭವಿಸುತ್ತೇನೆ ಎಂದು ತಿಳಿಸಿದ್ದಾರೆ.
ಕೆಜಿಎಫ್ ಸರಣಿಯ ಸಿನಿಮಾಗಳಿಂದಲೂ ತಾವು ಇದೇ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದು, ಮೌಲ್ಯವಿದ್ದರಷ್ಟೇ ಹಣ ಸಿಗುತ್ತದೆ ಎಂದು ನಟ ಯಶ್ ಅಭಿಪ್ರಾಯಪಟ್ಟಿದ್ದಾರೆ.