
ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಟೂರ್ನಿಯಲ್ಲಿ ಮಳೆಯ ಕಾರಣದಿಂದ ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ರದ್ದಾಗಿದೆ.
ಮಳೆಯಿಂದಾಗಿ ಟಾಸ್ ಪ್ರಕ್ರಿಯೆಯೂ ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಕೌಟ್ ಹಂತದ ಪಂದ್ಯಗಳು ರದ್ದಾದರೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಮುಂದಿರುವ ತಂಡ ಅರ್ಹತೆ ಪಡೆಯುವ ನಿಯಮ ಅನ್ವಯವಾಗಿದೆ.
ಹಾಂಗ್ ಕಾಂಗ್ಗಿಂತ ರ‍್ಯಾಂಕಿಂಗ್‌ನಲ್ಲಿ ಮುಂದಿರುವ ಪಾಕಿಸ್ತಾನ ತಂಡವು ಯಾವುದೇ ಆಟವಾಡದೆಯೇ ಅಕ್ಟೋಬರ್ 1ರಂದು ನಡೆಯಲಿರುವ ಸೆಮಿಫೈನಲ್‌ಗೆ ಪ್ರವೇಶಿಸಿದೆ.