
ಕನ್ನಡದ ನಟಿ ಭೂಮಿ ಶೆಟ್ಟಿ ಅವರು ಪ್ರಶಾಂತ್ ವರ್ಮಾ ಅವರ ಕಥೆಯುಳ್ಳ ‘ಮಹಾಕಾಳಿ’ ಎಂಬ ಪೌರಾಣಿಕ ತೆಲುಗು ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿಶ್ವಾಮಿತ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವು ಆಗಸ್ಟ್ 24ರಂದು ಬಿಡುಗಡೆಯಾಗಲಿದೆ.
ಪೂಜಾ ಕೊಲ್ಲೂರು ನಿರ್ದೇಶನದ ಈ ಚಿತ್ರವನ್ನು ಆರ್ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ನಿರ್ಮಿಸಿದ್ದಾರೆ.