
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಮೊಸಳೆ ಪಾರ್ಕ್‌ನಲ್ಲಿ ಪ್ರವಾಸಿಗನೊಬ್ಬನ ಧ್ವನಿಗೆ ನದಿಯಿಂದ ದಡಕ್ಕೆ ಬಂದ ಅಪರೂಪದ ಮೊಸಳೆಯ ದೃಶ್ಯ ಸೆರೆಯಾಗಿದೆ.
ಹುಬ್ಬಳ್ಳಿ ಭಾಗದಿಂದ ಬಂದಿದ್ದ ಪ್ರವಾಸಿಗರು ಬಾತುಕೋಳಿಯ ಧ್ವನಿಯನ್ನು ಅನುಕರಣೆ ಮಾಡಿದಾಗ ಈ ಕುತೂಹಲಕಾರಿ ಘಟನೆ ನಡೆದಿದೆ.
ಪ್ರವಾಸಿಗರ ಈ ಚೇಷ್ಟೆಯಿಂದ ದೂರದಿಂದ ಓಡಿಬಂದ ಮೊಸಳೆಗಳ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.