
ಕೋಲಾರ ಜಿಲ್ಲೆಯ ಕೆಜಿಎಫ್ನ ಬೋರಿಲಾಲ್ ಪೇಟೆಯಲ್ಲಿ ಲಕ್ಷಾಂತರ ಕಂಬಳಿ ಹುಳುಗಳು ಹರಿದಾಡುತ್ತಿದ್ದು, ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಅತಿಯಾದ ಸ್ವಚ್ಛತೆ ಕೊರತೆ ಮತ್ತು ಸುತ್ತಮುತ್ತ ಬೆಳೆದಿರುವ ಆವುಡಲಕಾಯಿ ಗಿಡಗಳೇ ಈ ಹುಳುಗಳ ಸಂತತಿ ಹೆಚ್ಚಾಗಲು ಕಾರಣ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ, ಬಾಧಿತರಿಗೆ ಚಿಕಿತ್ಸೆ ನೀಡಿದ್ದು, ನಗರಸಭೆ ಅಧಿಕಾರಿಗಳು ಔಷಧಿ ಸಿಂಪಡಣೆ ಮಾಡಿದ್ದಾರೆ.