
ಪ್ರಜಾಸೇವಾ ಆಂದೋಲನದ ಕುರಿತು ಮಾಹಿತಿ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಡಿಸಿ ಜಿ.ಪ್ರಭು ಅವರು ಶಿಡ್ಲಘಟ್ಟ ತಹಶೀಲ್ದಾರ್ ಗನ ಸಿಂಧೂ ಅವರನ್ನು ವೇದಿಕೆಯ ಮೇಲೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ವೈ.ಹುನಸೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಕಡತಗಳ ವಿಲೇವಾರಿ ಮಾಡದಿರುವ ಗಂಭೀರ ಆರೋಪವೂ ಅವರ ಮೇಲೆ ಕೇಳಿಬಂದಿದೆ.
ದೂರು ನೀಡುವ ಸಾರ್ವಜನಿಕರಿಗೆ ಸೂಕ್ತ ಹಿಂಬರಹ ಹಾಗೂ ದಾಖಲೆಗಳನ್ನು ನೀಡದ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಮೇಲೆ ಗರಂ ಆಗಿದ್ದಾರೆ.