
ಭಾರತೀಯ ರೈಲ್ವೆ ಇಲಾಖೆಯು ಆನ್‌ಲೈನ್ ಟಿಕೆಟ್‌ಗಳ ಜೊತೆಗೆ ರೈಲ್ವೆ ರಿಸರ್ವೇಶನ್ ಕೌಂಟರ್‌ಗಳಲ್ಲಿ ಪಡೆಯುವ ಪೇಪರ್ ಟಿಕೆಟ್‌ಗಳಿಗೂ ₹10 ಲಕ್ಷ ಅಪಘಾತ ವಿಮೆ ಸೌಲಭ್ಯವನ್ನು ವಿಸ್ತರಿಸಿದೆ.
ಕೇವಲ 45 ಪೈಸೆ ಪ್ರೀಮಿಯಂ ಇರುವ ಈ ವಿಮೆ ಪಡೆಯಲು ಟಿಕೆಟ್ ದರ ಹಾಗೂ ಪ್ರೀಮಿಯಂ ಮೊತ್ತವನ್ನು ಕಡ್ಡಾಯವಾಗಿ ಡಿಜಿಟಲ್ ಮಾಧ್ಯಮದಲ್ಲೇ ಪಾವತಿಸಬೇಕು.
ರೈಲು ಪ್ರಯಾಣದ ವೇಳೆ ಸಾವು ಅಥವಾ ಸಂಪೂರ್ಣ ಶಾಶ್ವತ ಅಂಗವಿಕಲತೆಗೆ ₹10 ಲಕ್ಷ ಹಾಗೂ ಗಾಯಗೊಂಡರೆ ₹2 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಸಿಗಲಿದೆ.