
ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಚೆಸ್ ಲೀಗ್ ಫೈನಲ್‌ನಲ್ಲಿ ಗ್ಯಾಂಜೆಸ್ ಗ್ರ್ಯಾಂಡ್‌ಮಾಸ್ಟರ್ಸ್ ತಂಡವು 7-5 ಅಂತರದಿಂದ ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ಪಂದ್ಯದ ನಿರ್ಣಾಯಕ ಹಂತದಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಎಸಗಿದ ತಪ್ಪಿನ ಲಾಭ ಪಡೆದ ಇಯಾನ್ ನಿಪೊಮ್‌ನಿಷಿ ಜಯ ಸಾಧಿಸಿದರು.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗ್ರೀಸ್‌ನ ಸ್ಟಾವ್ರೂಲಾ ತ್ಸೋಲಾಕಿಡೌ ‘ಟೂರ್ನಿಯ ಅತ್ಯುತ್ತಮ ಆಟಗಾರ್ತಿ’ ಗೌರವ ಪಡೆದಿದ್ದಾರೆ.