
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಅಕ್ಟೋಬರ್ 22ರಂದು ಶಾಲೆಗಳಿಗೆ ರಜೆ ಘೋಷಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ದಸರಾ ಉತ್ಸವದ ಕೊನೆಯ ದಿನವಾದ ಅಕ್ಟೋಬರ್ 21ರಂದು ತಡರಾತ್ರಿಯವರೆಗೆ ಪೂಜೆ ಹಾಗೂ ಮೆರವಣಿಗೆಗಳು ಜರುಗಿದ್ದರಿಂದ ಪೋಷಕರು ಮತ್ತು ಸಾರ್ವಜನಿಕರ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೆಚ್ಚುವರಿ ರಜೆಯ ದಿನದ ಬೋಧನಾ ಕಾರ್ಯವನ್ನು ಸರಿದೂಗಿಸಲು ಮುಖ್ಯ ಶಿಕ್ಷಕರು ತಮ್ಮ ವಿವೇಚನೆಯ ಸ್ಥಳೀಯ ರಜೆಗಳಲ್ಲಿ ಒಂದನ್ನು ಬಳಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.