
ಎಚ್ಡಿಎಫ್ಸಿ ಬ್ಯಾಂಕ್ನ ಎಂಡಿ ಮತ್ತು ಸಿಇಒ ಶಶಿಧರ್ ಜಗದೀಶನ್ ಅವರು ಅಕ್ಟೋಬರ್ 26 ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಮರುನೇಮಕಕ್ಕೆ ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.
61 ವರ್ಷದ ಜಗದೀಶನ್ ಅವರು 2020ರ ಅಕ್ಟೋಬರ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯಲ್ಲಿ ಎಚ್ಡಿಎಫ್ಸಿ ಲಿಮಿಟೆಡ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ನ ಐತಿಹಾಸಿಕ ವಿಲೀನ ಯಶಸ್ವಿಯಾಗಿ ನೆರವೇರಿತ್ತು.
ಅಮೆರಿಕದ ಹೂಡಿಕೆದಾರರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ಲಾಸ್ ಆಕ್ಷನ್ ಮೊಕದ್ದಮೆ ಹೂಡಿರುವ ವಿವಾದಗಳ ನಡುವೆಯೇ ಜಗದೀಶನ್ ಅವರ ನಿರ್ಗಮನವು ಮಹತ್ವ ಪಡೆದುಕೊಂಡಿದೆ.