
1979ರಲ್ಲಿ ಜನಿಸಿದ ಅರ್ಪಿತಾ ಲಂಕೇಶ್ ಅವರು ಪ್ರತಿಷ್ಠಿತ ‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಎಂಜಿನಿಯರಿಂಗ್ ಪದವೀಧರೆಯಾಗಿರುವ ಅರ್ಪಿತಾ, ಕಳೆದ 25 ವರ್ಷಗಳಿಂದ ಐಟಿ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಮತ್ತು ತಾಯಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಈ ಸಾಧನೆ ಮಾಡಿದ್ದಾರೆ.
1996ರಲ್ಲಿ ಡಾ. ಟ್ರೇಸಿ ಕೆಂಬಲ್ ಅವರಿಂದ ಸ್ಥಾಪಿಸಲ್ಪಟ್ಟ ಈ ಸ್ಪರ್ಧೆಯು ವಿವಾಹಿತ ಮಹಿಳೆಯರ ಸೌಂದರ್ಯ, ಬುದ್ಧಿವಂತಿಕೆ, ನಾಯಕತ್ವ ಮತ್ತು ಸಾಮಾಜಿಕ ಸೇವೆಯನ್ನು ಗೌರವಿಸುತ್ತದೆ.