
ಜಿಂಬಾಬ್ವೆ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಕ್ಯಾಚ್ ಕೈಬಿಟ್ಟ ಬೇಸರದಲ್ಲಿ ಚೆಂಡನ್ನು ನೆಲಕ್ಕೆ ಎಸೆದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರಿಗೆ ಐಸಿಸಿ ಅಧಿಕೃತ ಎಚ್ಚರಿಕೆ ನೀಡಿ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಿದೆ.
ರಾಯ್ಪುರದಲ್ಲಿ ನಡೆದ ಪಂದ್ಯದ 12ನೇ ಓವರ್ನಲ್ಲಿ ಬೌಲರ್ ಶ್ರೀ ಚರಣಿ ಅವರ ಎಸೆತದಲ್ಲಿ ಶಫಾಲಿ ಅವರು ಮಿಡ್ಆಫ್ನಲ್ಲಿ ಕ್ಯಾಚ್ ಕೈಚೆಲ್ಲಿದಾಗ ಈ ಘಟನೆ ನಡೆದಿದ್ದು, ಇದು ಐಸಿಸಿ ನಿಯಮ 2.2ರ ಮೊದಲ ಹಂತದ ಉಲ್ಲಂಘನೆಯಾಗಿದೆ.
ಶಫಾಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಜಿ.ಎಸ್. ಲಕ್ಷ್ಮಿ ಸೂಚಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ. ಕಳೆದ 24 ತಿಂಗಳಲ್ಲಿ ಅವರ ವಿರುದ್ಧ ದಾಖಲಾದ ಮೊದಲ ಶಿಸ್ತು ಉಲ್ಲಂಘನೆ ಇದಾಗಿದೆ.