
ರಾಜ್ಯದ ಆಹಾರ ಸುರಕ್ಷತಾ ಇಲಾಖೆಯಲ್ಲಿ ಮಂಜೂರಾದ 210 ಹುದ್ದೆಗಳ ಪೈಕಿ 113 ಹುದ್ದೆಗಳು ಖಾಲಿ ಇದ್ದು, ಕೇವಲ 97 ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಬ್ಬಂದಿ ಕೊರತೆಯಿಂದಾಗಿ ಹೋಟೆಲ್ಗಳ ಮೇಲೆ ನಿರಂತರ ದಾಳಿ ನಡೆಸುವುದು ಕಷ್ಟವಾಗುತ್ತಿದ್ದು, ಇತ್ತೀಚಿನ ತಪಾಸಣೆಗಾಗಿ ವಿವಿಧ ಜಿಲ್ಲೆಗಳಿಂದ 60 ಅಧಿಕಾರಿಗಳನ್ನು ಬೆಂಗಳೂರಿಗೆ ನಿಯೋಜಿಸಲಾಗಿತ್ತು.
ಜುಲೈನಲ್ಲಿ 59 ಹುದ್ದೆ ಭರ್ತಿಗೆ ಅನುಮೋದನೆ ಸಿಕ್ಕಿದ್ದರೂ ನೇಮಕಾತಿ ಪ್ರಕ್ರಿಯೆ ಬಾಕಿ ಇದ್ದು, ಅರ್ಹತಾ ಮಾನದಂಡ ಬದಲಾಯಿಸಲು ಕೆಇಎಗೆ ಮನವಿ ಮಾಡಲಾಗಿದೆ ಎಂದು ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.