
ರಾಜ್ಯ ಸರ್ಕಾರಿ ನೌಕರರು HRMS-2.0, e-SR ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ತಂತ್ರಾಂಶಗಳನ್ನು ಬಳಸುವಾಗ ಎದುರಾಗುವ ಸಮಸ್ಯೆಗಳಿಗೆ ನೇರ ಸಹಾಯವಾಣಿ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ.
ನೌಕರರು ತಾಂತ್ರಿಕ ನೆರವಿಗಾಗಿ IVRS ಸಹಾಯವಾಣಿ ಸಂಖ್ಯೆ 080-24413599 ಅಥವಾ ವಾಟ್ಸಾಪ್ ಸಹಾಯವಾಣಿ ಸಂಖ್ಯೆ 9141570176 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶನಾಲಯ ತಿಳಿಸಿದೆ.
ನೌಕರರ ಸಂಘದ ಮನವಿಯ ಮೇರೆಗೆ ಕೆನೆಪದರ ಮಿತಿಯನ್ನು 8 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಿಸುವ ಕಡತವನ್ನು ಸಚಿವರ ಅನುಮೋದನೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.