
ಜಪಾನ್ನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆ ಅಂಕಿತಾ ಸೆಹಗಲ್ ಅವರು ಅಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗಾಗಿ ಮಾಡಿರುವ ಅತ್ಯಾಧುನಿಕ ವ್ಯವಸ್ಥೆಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶೌಚಾಲಯಗಳಲ್ಲಿ ಮೇಕಪ್ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್ಗಳು, ಚಿಕ್ಕ ಮಕ್ಕಳಿಗಾಗಿ ಗೋಡೆಗೆ ಲಗತ್ತಿಸಿದ ಚೈಲ್ಡ್ ಸೀಟ್ ಹಾಗೂ ಒದ್ದೆ ನೆಲದಲ್ಲಿ ಕಾಲಿಡದೆ ಬಟ್ಟೆ ಬದಲಾಯಿಸಲು ಫೋಲ್ಡಿಂಗ್ ಬೋರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಗರಿಕರ ಸಣ್ಣ ಸಣ್ಣ ಅಗತ್ಯಗಳಿಗೂ ಜಪಾನ್ ದೇಶ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎಂದು ವಿವರಿಸಿರುವ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.