
ರಜನಿಕಾಂತ್ ಅಭಿನಯದ ಮುಂಬರುವ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾದ ತೆಲುಗು ರಾಜ್ಯಗಳ ಪ್ರದರ್ಶನ ಹಕ್ಕನ್ನು ಪ್ರಸಿದ್ಧ ನಿರ್ಮಾಪಕ ನಾಗವಂಶಿ ಅವರು ಬರೋಬ್ಬರಿ 45 ಕೋಟಿ ರೂ. ಭಾರಿ ಮೊತ್ತಕ್ಕೆ ಪಡೆದುಕೊಂಡಿದ್ದಾರೆ.
ಅಲ್ಲದೆ ಉತ್ತರ ಅಮೆರಿಕ, ಯುಕೆ, ಯುರೋಪ್ ಸೇರಿದಂತೆ ವಿದೇಶಿ ಮಾರುಕಟ್ಟೆಯ ಹಕ್ಕುಗಳು 47.5 ಕೋಟಿಗೆ ಮಾರಾಟವಾಗಿದ್ದು, ತೆಲುಗು ರಾಜ್ಯಗಳು ಹಾಗೂ ಓವರ್‌ಸೀಸ್ ಹಕ್ಕುಗಳ ಮೌಲ್ಯವೇ 90 ಕೋಟಿ ರೂ. ದಾಟಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಅಕ್ಟೋಬರ್ 15ರಂದು ತೆರೆಕಾಣಲಿದ್ದು, ಬಾಕ್ಸಾಫೀಸ್‌ನಲ್ಲಿ ವಿಜಯ್ ದೇವರಕೊಂಡ ಅವರ 'ರಣಬಾಲಿ' ಚಿತ್ರದೊಂದಿಗೆ ತೀವ್ರ ಪೈಪೋಟಿ ನಡೆಸಲಿದೆ.