ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಮದುವೆಗೂ ಮುನ್ನ ಎರಡು ಬಾರಿ ಐವಿಎಫ್ (IVF) ಮೂಲಕ ಮಗು ಪಡೆದುಕೊಳ್ಳಲು ಪ್ರಯತ್ನಿಸಿದ್ದಾಗಿ 'ಆನ್ ರೈಸ್ ಆ್ಯಂಡ್ ಪಾಲ್ ಸೀಸನ್ 2' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.
ಮದುವೆಯಾಗದಿದ್ದರೂ ಮಗು ಪಡೆಯುವ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದರು. ಆದರೆ, ಐವಿಎಫ್ ಮೂಲಕ ಮಗು ಪಡೆಯುವ ಪ್ರಯತ್ನ ಯಶಸ್ವಿಯಾಗಿರಲಿಲ್ಲ ಎಂದು ಸ್ವರಾ ಹೇಳಿದ್ದಾರೆ.
ರಾಜಕೀಯ ಕಾರ್ಯಕರ್ತ ಫಹಾದ್ ಅಹಮದ್ ಅವರನ್ನು 2023ರ ಫೆಬ್ರವರಿ 16ರಂದು ವಿವಾಹವಾದ ಸ್ವರಾ, ಅದೇ ವರ್ಷ ಸೆಪ್ಟೆಂಬರ್ 23ರಂದು ರಾಬಿಯಾ ರಾಮ ಅಹಮದ್ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.