
ವಿಶ್ವವಿದ್ಯಾನಿಲಯಗಳ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪರ ವಿಡಿಯೋ ಬಿಡುಗಡೆ ಮಾಡಿದ್ದ ನಟ ನಾಸಿರುದ್ದೀನ್ ಶಾ ಅವರನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ.
ನಾಸಿರುದ್ದೀನ್ ಶಾ ಅವರನ್ನು ಅಪಾಯಕಾರಿ ಅರ್ಬನ್ 'ದಿಮಾಗಿ ನಕ್ಸಲ್' ಎಂದು ಕರೆದಿರುವ ರಿಜಿಜು, ಅವರ ವಿಚಾರಗಳು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಎಂದಿದ್ದಾರೆ.
ತಮ್ಮ ವಿಡಿಯೋದಲ್ಲಿ ನಾಸಿರುದ್ದೀನ್ ಶಾ, ಜಾಮಿಯಾ ಮಿಲ್ಲಿಯಾ, ಜೆಎನ್‌ಯು ಹಾಗೂ ಸತ್ಯಜಿತ್ ರೇ ಫಿಲ್ಮ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳನ್ನು ಬೆಂಬಲಿಸಿದ್ದರು.