
ಏಕದಿನ ವಿಶ್ವಕಪ್ ದೃಷ್ಟಿಯಿಂದ ಭಾರತ ತಂಡದ ಮಧ್ಯಮ ಕ್ರಮಾಂಕದ ಆಲ್‌ರೌಂಡರ್ ಕೊರತೆ ನೀಗಿಸಲು ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಬೌಲಿಂಗ್‌ಗೆ ಸಿದ್ಧಪಡಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಬಲಗೈ ಬ್ಯಾಟರ್‌ಗಳೇ ಹೆಚ್ಚಿರುವ ತಂಡದಲ್ಲಿ ಎಡಗೈ ಬ್ಯಾಟರ್ ಆಗಿರುವ ತಿಲಕ್ ವರ್ಮಾ ಅವರ ಆಫ್-ಸ್ಪಿನ್ ಬೌಲಿಂಗ್ ತಂಡಕ್ಕೆ ಹೆಚ್ಚಿನ ಸಮತೋಲನ ನೀಡಲಿದೆ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ.
ಅಕ್ಟೋಬರ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ಪ್ರವಾಸದಲ್ಲಿ ತಿಲಕ್ ವರ್ಮಾ ಅವರಿಗೆ ಸತತ ಅವಕಾಶಗಳನ್ನು ನೀಡಿ, ಅವರನ್ನು ಪಾರ್ಟ್-ಟೈಮ್ ಆಲ್‌ರೌಂಡರ್ ಆಗಿ ರೂಪಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ.