
ಬರಗಾಲ ಹಾಗೂ ದರ ಏರಿಕೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಾಗಿದೆ.
ಸರ್ಕಾರದ ಈ ದರ ಹೆಚ್ಚಳದ ಕ್ರಮವನ್ನು ವಿರೋಧಿಸಿ, ಮೈಸೂರಿನ ಕಡಕೋಳದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯು ನವ ದಂಪತಿಗಳಿಗೆ ಹಾಲು ಹಾಗೂ ಮೊಸರನ್ನು ಉಡುಗೊರೆಯಾಗಿ ನೀಡಿದೆ.
ಜನಸಾಮಾನ್ಯರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಲೆ ಏರಿಕೆಯಿಂದ ಜನರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೇದಿಕೆಯು ಒತ್ತಾಯಿಸಿದೆ.