
ರಾಜ್ಯ ಸರ್ಕಾರವು ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ವೇತನದ ವಾರ್ಷಿಕ ಆದಾಯ ಮಿತಿಯನ್ನು 32,000 ರೂ.ನಿಂದ 1.20 ಲಕ್ಷ ರೂ.ಗೆ ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಈ ನಿರ್ಧಾರದಿಂದಾಗಿ ಆದಾಯ ಮಿತಿಯ ಕಾರಣಕ್ಕೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದ ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ಸಿಗಲಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕುಟುಂಬ ದತ್ತಾಂಶ ಪರಿಶೀಲನೆಯಲ್ಲಿ ಸಂದೇಹಾಸ್ಪದವೆಂದು ಕಂಡುಬಂದಿದ್ದ 23,14,544 ಫಲಾನುಭವಿಗಳ ಪೈಕಿ, ಹೊಸ ಆದಾಯ ಮಿತಿಯೊಳಗೆ ಬರುವ ಅರ್ಹರಿಗೆ ಪಿಂಚಣಿ ಮುಂದುವರಿಸಲು ನಿರ್ಧರಿಸಲಾಗಿದೆ.