
ಗಣೇಶ ಚತುರ್ಥಿ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆ ಇಲಾಖೆಯು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
ರೈಲು ಸಂಖ್ಯೆ 06563 ಮತ್ತು 06564 ವಿಶೇಷ ರೈಲುಗಳು ಸೆಪ್ಟೆಂಬರ್ 11 ಹಾಗೂ 12ರಂದು ಎಸ್ಎಂವಿಟಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ಸಂಚರಿಸಲಿವೆ.
ಹಾಗೆಯೇ ಸೆಪ್ಟೆಂಬರ್ 13 ಮತ್ತು 14ರಂದು ಹೆಚ್ಚುವರಿಯಾಗಿ ಮತ್ತೊಂದು ಜೋಡಿ ವಿಶೇಷ ರೈಲುಗಳು (ರೈಲು ಸಂ. 06583/06584) ಕಾರ್ಯಾಚರಿಸಲಿವೆ.